ಕಲ್ಯಾಣ ಕುವರ ಮೊದಲ ಹಂತ ಮುಕ್ತಾಯ
Posted date: 16 Sat, May 2015 – 08:51:54 AM

 ಭರತ್ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ಕೃಷ್ಣಕಾಂತ್, ನಿರ್ಮಿಸಿ, ನಿರ್ದೇಶಿಸಿ ಪ್ರಧಾನ ಪಾತ್ರ ನಿರ್ವಹಿಸುತ್ತಿರುವ ಕಲ್ಯಾಣ ಕುವರ ಚಿತ್ರ ಚೆನ್ನಬಸವ ಪಟ್ಟದೇವರು (೧೮೯೦-೧೯೯೯) ಜೀವನ ಆಧಾರಿತ ಚಿತ್ರ ಸಮಾಜಮುಖಿಯಾಗಿ ಬಸವಾದಿ ಶರಣರ ತತ್ವ ನಡೆನುಡಿಯಲ್ಲಿ ಪಾಲಿಸಿದವರು ಶಿಕ್ಷನ ಹಾಗೂ ಕಾಯಕಕ್ಕೆ  ಮಹತ್ವ ಕಲ್ಪಿಸಿಕೊಟ್ಟವರು ಇಲ್ಲಿ ಜಾತಿಮತ ನೋಡದೆ ಸರ್ವರಿಗೂ ಸಮಾನತೆ ಕಂಡವರು. ಈ ಚಿತ್ರಕ್ಕೆ ಭಾಲ್ಕಿಯಲ್ಲಿ ಬಸವಜಯಂತಿ ಸುಮಾರು ೩೦೦೦೦ ಜನ ಸೇರಿದ ಜಾತ್ರೆ ಇದರಲ್ಲಿ ಹಲವು ಸ್ವಾಮೀಜಿಗಳು ಸ್ಥಳೀಯರು ಪಾಲ್ಗೊಂಡಿದ್ದು,  ವಿವಿದ ಕಲಾಮೇಳಗಳು, ಶರಣರ ವೇಶಭೂಷಣರ ಆಚರಣೆ, ಸ್ವಾಮೀಜಿ ಲಿಂಗೈಕ್ಯರಾದ ದಿನ ಅಂದರೆ ಬಸವಜಯಂತಿ ಆಚರಿಸುವ ದೃಶ್ಯ ಚಿತ್ರೀಕರಿಸಲಾಯಿತು ಬೀದರ್‌ಜಿಲ್ಲೆಯ ಕಮಲನಗರದಲ್ಲಿ ಜನನ, ಬಾಲ್ಯ ಜಿವನ, ಮುಧೋಳು ಶಿವಲಿಂಗ ಸ್ವಾಮಿಗಳಿಂದ ವಿದ್ಯಾಭ್ಯಾಸ ಮತ್ತು ಪ್ರಸಾದ ದೀಕ್ಷೆ ಔರಾದ್ ಕೇದಾರಗಳಂಗಳಪ್ಪ ಶಾಲೆಯ ಕನ್ನಡ ಅಧ್ಯಯನ ಮೂರ್ಗಿಯಲ್ಲಿ ಕನ್ನಡ ಶಾಲೆ ಸ್ಥಾಪನೆ, ಶಾಲೆಯ ಹೊರಭಾಗದಲ್ಲಿ ಉರ್ದುಭಾಷೆಯ ಫಲಕ ಹಾಕಿ ಒಳಭಾಗದಲ್ಲಿ ಕನ್ನಡ ಕಲಿಸುವಿಕೆ (ಆಗ ಹೈದರಾಬಾದ್ ನಿಜಾಮನ ಆಡಳಿತ ಪ್ರದೇಶವಾಗಿತ್ತು)  ಇಲ್ಲಿ ನಡೆದ ಚಿತ್ರೀಕರಣ ದೃಶ್ಯಗಳಲ್ಲಿ ಭರತ್, ವಿಷ್ಣುಕಾಂತ್, ಸುಭಾಷ್ ಕಡಕೋಳ, ಗುಂಡ್ಲುಪೇಟೆ ಸುರೇಶ, ಓಂಪ್ರಕಾಶ್ ರೊಟ್ಟಿ, ಹನುಮಂತ ಕಡಿಕೆ, ಡಾ|| ವಿಶ್ವನಾಥಪ್ರಭ ಮುಂತಾದವರು ಅಭಿನಯಿಸಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed